ಎಲ್ಲಾ 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸೋದಿಲ್ಲ, ಅಂದ್ರು ಎಚ್ ಡಿ ಕುಮಾರಸ್ವಾಮಿ | Oneindia Kannada

2017-12-08 2,038

JDS will not contest in all the 224 constituency in upcoming Karnataka Assembly election - 2018, due to party is not having enough good base in more than 55+ plus constituencies, JDS State President H D Kumaraswamy.


ರಾಜ್ಯದ 224 ಕ್ಷೇತ್ರಗಳಲ್ಲೂ ಸಂಚರಿಸಿ ಪಕ್ಷವನ್ನು ಬಲಪಡಿಸುತ್ತೇನೆಂದು ಹೇಳಿದ್ದ ಜೆಡಿಎಸ್ ವರಿಷ್ಠ ದೇವೇಗೌಡರ ಮಾತಿಗೆ, ಕುಮಾರಸ್ವಾಮಿ ಕೂಡಾ ಹೌದುಹೌದು ಅಂದಿದ್ದರು. ಆದರೆ, ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗುವ ಮುನ್ನವೇ ತಮ್ಮ ಮಾತಿನಿಂದ ಅಪ್ಪಮಕ್ಕಳು ಹಿಂದಕ್ಕೆ ಸರಿದಂತೆ ಕಾಣುತ್ತಿದೆ.ಕಳೆದ ಚುನಾವಣೆಯಲ್ಲಿ ನಾವು ಬಹಳಷ್ಟು ಪಾಠವನ್ನು ಕಲಿತಿದ್ದೇವೆ, ಎಲ್ಲಿ ಪಕ್ಷಕ್ಕೆ ನೆಲೆಯಿದೆಯೋ ಅಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡುವ ಮೂಲಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ (ಕೆಲವು ಜಿಲ್ಲೆಗಳಲ್ಲಿ) ಮತ್ತು ಕರಾವಳಿ ಭಾಗದಲ್ಲಿ ಯುದ್ದಕ್ಕೆ ಮುನ್ನವೇ ಜೆಡಿಎಸ್ ಶಸ್ತ್ರತ್ಯಾಗ ಮಾಡಿತೇ ಎನ್ನುವ ಸಂದೇಹ ಮೂಡಲಾರಂಭಿಸಿದೆ.ಮನೆಯಲ್ಲಿ ಕೂತರೂ ಅರವತ್ತು, ಎಪ್ಪತ್ತು ಸೀಟು ಗ್ಯಾರಂಟಿ ಅಂದಿರುವ ಕುಮಾರಸ್ವಾಮಿ, ಮಧ್ಯ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಉತ್ತಮ ಅವಕಾಶವಿದೆ, ಹಾಗಾಗಿ ಆ ಭಾಗದಲ್ಲಿ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದಿದ್ದಾರೆ.

Free Traffic Exchange